34 ವರ್ಷದ ಈ ಯುವತಿಯೇ ಟಾಟಾ ಗ್ರೂಪ್ ನ ಉತ್ತರಾಧಿಕಾರಿ! ದೈತ್ಯ ಸಾಮ್ರಾಜ್ಯದ ಜವಾಬ್ದಾರಿ ಹೊರಲು ಮುಂದಾಗಿರುವ ಈಕೆ ಯಾರು ? : ಟಾಟಾ ಗ್ರೂಪಿನ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದ್ರೆ ಆ ಕುತುಉಹಲಕ್ಕೆ ಈಗ ತೆರೆ ಬಿದ್ದಿದೆ. :ನಂಬಿಕೆಗೆ ಮತ್ತೊಂದು ಹೆಸರೇ ಟಾಟಾ ಗ್ರೂಪ್. ಉಪ್ಪಿನಿಂದ ಹಿಡಿದು ವಿಮಾನದವರೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಟಾಟಾ ತನ್ನ ಛಾಪು ಮೂಡಿಸಿದೆ. ಇಂದು ಟಾಟಾ ಗ್ರೂಪ್ ಈ ಹಣತಕ್ಕೆ ಬೆಳೆದಿರುವ ಹಿಂದೆ ಇರುವುದು ಜೆಆರ್ ಡಿ ಟಾಟಾ ಮತ್ತು ರತನ್ ಟಾಟಾ ಅವರ ವರ್ಷಗಳ ಪರಿಶ್ರಮ.ವಯಸ್ಸಿನ ಕಾರಣದಿಂದಾಗಿ ಇನ್ನು ಮುಂದೆ ರತನ್ ಟಾಟಾ ಈ ಸಂಸ್ಥೆಯನ್ನು ಮುನ್ನಡೆಸುವುದು ಕಷ್ಟ. ಹಾಗಾಗಿ ಈ ಬೃಹತ್ ಸಾಮ್ರಾಜ್ಯದ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಲೇ ಬೇಕು. 34 ವರ್ಷದ ಮಾಯಾ ಟಾಟಾ ದೇಶದ ಅತ್ಯಂತ ಪ್ರಭಾವಶಾಲಿ ವ್ಯಾಪಾರ ಸಾಮ್ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಹೊರಲಿದ್ದಾರೆ. ಯಾರು ಈ ಮಾಯಾ ಟಾಟಾ ? :ಅವರು ಟಾಟಾ ಗ್ರೂಪಿಗೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ.ಮಾಯಾ, ರತನ್ ಟಾಟಾ ಅವರ ಸಹೋದರನ ಮಗಳು. ಮಾಯಾ ಟಾಟಾ ಅವರು ನೋಯೆಲ್ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಪುತ್ರಿ. ನೋಯೆಲ್ ಟಾಟಾ, ರತನ್ ಟಾಟಾ ಅವರ ಮಲ ಸಹೋದರ.ಅವರ ತಾಯಿ,ಅಲ್ಲು ಮಿಸ್ತ್ರಿ, ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿವಂಗತ ಸೈರಸ್ ಮಿಸ್ತ್ರಿ ಅವರ ಸಹೋದರಿ.ಮಿಸ್ತ್ರಿ ಕುಟುಂಬವು ಸೈರಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್‌ಮೆಂಟ್ ಗ್ರೂಪ್ ಮೂಲಕ ಟಾಟಾ ಸನ್ಸ್‌ನಲ್ಲಿ 18.4% ಪಾಲನ್ನು ಹೊಂದಿದೆ.ಟಾಟಾ ಸನ್ಸ್‌ನಲ್ಲಿ ಅವರ ಪಾಲನ್ನು ಪರಿಗಣಿಸಿ, ಭವಿಷ್ಯದಲ್ಲಿ ಅವರೇ ಟಾಟಾ ಗ್ರೂಪ್ ಅನ್ನು ಮುನ್ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: 34ರ ಹರೆಯದ ಮಾಯಾ ಟಾಟಾ ಗ್ರೂಪ್‌ನಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.ಅವರು ವಾರ್ವಿಕ್ ವಿಶ್ವವಿದ್ಯಾನಿಲಯ ಮತ್ತು ಯ ಬೇಯೆಸ್ ಬಿಸಿನೆಸ್ ಸ್ಕೂಲ್ ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಟಾಟಾ ಕ್ಯಾಪಿಟಲ್‌ನ ಪ್ರಮುಖ ಖಾಸಗಿ ಇಕ್ವಿಟಿ ಫಂಡ್ ಟಾಟಾ ಆಪರ್ಚುನಿಟೀಸ್ ಫಂಡ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಅವರು ಬಂಡವಾಳ ನಿರ್ವಹಣೆ ಮತ್ತು ಹೂಡಿಕೆದಾರರ ಸಂಬಂಧಗಳಲ್ಲಿ ಉತ್ತಮ ಸಾಧನೆ ಮಾಡಿದರು. ಟಾಟಾ ಹೊಸ ಆಪ್ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ :ಇದಷ್ಟೇ ಅಲ್ಲ,ಕೆಲಸ ಮಾಡುತ್ತಿರುವಾಗ ಟಾಟಾ ನ್ಯೂ ಆಪ್ ಬಿಡುಗಡೆ ಮಾಡುವಲ್ಲಿ ಮಾಯಾ ಪ್ರಮುಖ ಪಾತ್ರ ವಹಿಸಿದ್ದಾರೆ.ಇದು ಗ್ರೂಪಿನ ದೊಡ್ಡ ಸಾಧನೆಯಾಗಿತ್ತು. ಪ್ರಸ್ತುತ ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಆರು ಮಂಡಳಿಯ ಸದಸ್ಯರಲ್ಲಿ ಒಬ್ಬರು.ಇದು ಕೋಲ್ಕತ್ತಾದಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು,ಇದನ್ನು 2011 ರಲ್ಲಿ ರತನ್ ಟಾಟಾ ಉದ್ಘಾಟಿಸಿದ್ದರು. ಇದನ್ನೂ ಓದಿ : ಮೂಲಗಳ ಪ್ರಕಾರ ಟಾಟಾ ಗ್ರೂಪ್‌ನಲ್ಲಿ ಮಾಯಾ ಪ್ರಭಾವ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಹಂತ ಹಂತವಾಗಿ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಲು ಇವರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟಾಟಾ ಸನ್ಸ್‌ನ ಎಜಿಎಂನಲ್ಲಿ ಮಾಯಾ ಅವರ ಪಾತ್ರವನ್ನು ನೋಡಿದ ನಂತರ, ಭವಿಷ್ಯದಲ್ಲಿ ಈ ಸಾಮ್ರಾಜ್ಯದ ಜವಾಬ್ದಾರಿ ಮಾಯಾ ಟಾಟಾ ಕೈಗೆ ಹೋದರೆ ಆಶ್ಚರ್ಯವಿಲ್ಲ ಎನ್ನಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...