ಕಿವಿಗೆ ಕಾಟನ್ ಬಡ್ಸ್ ಬಳಸುತ್ತೀರಾ..? ಹಾಗಿದ್ರೆ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿ : ಕಿವಿಗಳನ್ನು ಸ್ವಚ್ಛಗೊಳಿಸಲು ಬಹುತೇಕ ಜನರು ಕಾಟನ್‌ ಬಡ್ಸ್‌ಗಳನ್ನು ಬಳಸುತ್ತಾರೆ. ಆದರೆ ಇದನ್ನು ಹೆಚ್ಚಾಗಿ ಬಳಸುವುದು ಸಹ ಅಪಾರಯಕಾರಿ ಅಂತ ಹೇಳಲಾಗುತ್ತದೆ.. ಇದು ಕಿವಿಗೆ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.. :ಕಿವಿಯನ್ನು ಸ್ವಚ್ಛಗೊಳಿಸಲು ನಾವು ಬಳಸುವ ಹತ್ತಿ ಬಡ್ಸ್‌ ಶ್ರವಣ ದೋಷಕ್ಕೆ ಕಾರಣವಾಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಕಾಟನ್‌ ಬಡ್ಸ್‌ ಬಳಸುವುದನ್ನು ತಪ್ಪಿಸಿ. ಏಕೆಂದರೆ, ಅವು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಇದನ್ನು ಬಳಸುತ್ತಾರೆ, ಇದು ನಾನಾ ಸಮಸ್ಯೆಗಳು ತರಬಹುದು ಎನ್ನುವುದನ್ನು ಮರೆಯಬಾರದು.. ಸ್ನಾನ ಮುಗಿಸಿ ಹೊರಬಂದ ತಕ್ಷಣ ಕಿವಿಗೆ ಹಾಕಿಕೊಳ್ಳಲು ಬಡ್ಸ್‌ ಹುಡುಕುತ್ತೇವೆ. ಸ್ನಾನ ಮಾಡುವಾಗ ನೀರು ಒಳಗೆ ಹೋದ ಕಾರಣ ಅದನ್ನು ಸ್ವಚ್ಛಗೊಳಿಸಲು ಕಿವಿಯಲ್ಲಿ ಹತ್ತಿ ಬಡ್ಸ್‌ ಬಳಸುತ್ತೇವೆ. ನಮ್ಮ ಕಿವಿಗಳು ಸ್ವಾಭಾವಿಕವಾಗಿ ಶುಚಿಯಾಗುವುದರಿಂದ ಇಂತಹ ವಸ್ತುಗಳನ್ನು ಬಳಸುವುದನ್ನು ತಪ್ಪಿಸುವಂತೆ ವೈದ್ಯರು ಹೇಳಿದರೂ ನಾವು ಕೇಳುವುದಿಲ್ಲ. ಇದನ್ನೂ ಓದಿ: ಕಿವಿನೋವು, ಊತ, ಶ್ರವಣ ದೋಷ ಮುಂತಾದ ಹಲವಾರು ಸಮಸ್ಯೆಗಳಿಂದ ತಾತ್ಕಾಲಿಕ ಉಪಶಮನ ನೀಡಲು ಹತ್ತಿ ಬಡ್ಸ್ ಬಳಸುತ್ತಿದ್ದೇವೆ. ಈ ಬಡ್ಸ್‌ನಲ್ಲಿ ಬ್ಯಾಕ್ಟೀರಿಯಾಗಳು ಅಧಿಕವಾಗಿದ್ದು, ಇದು ಕಿವಿಯ ಸೋಂಕಿಗೆ ಕಾರಣವಾಗಬಹುದು. ಕಿವಿಯೊಳಗೆ ಹತ್ತಿ ಬಡ್ಸ್‌ ಹಾಕಿಕೊಳ್ಳುವುದರಿಂದ ಕೆಲವೊಂದು ಸಾರಿ ತುದಿಗೆ ಸುದ್ದಿ ಹತ್ತಿ ಸರಿದು ಚರ್ಮಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಊತ, ನೋವು ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು ಎಂದು ಕಿವಿ ವೈದ್ಯರು ಹೇಳುತ್ತಾರೆ. ಅಂತಹ ಸಮಸ್ಯೆಗಳ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...