ನೀವು ಕಾಂಟ್ಯಾಕ್ಟ್ ಲೆನ್ಸ್‌ ಬಳಸ್ತೀರಾ? ಹಾಗಿದ್ದರೆ ಈ ವಿಚಾರಗಳ ಬಗ್ಗೆ ಇರಲಿ ವಿಶೇಷ ಗಮನ : ದೃಷ್ಟಿ ಸಮಸ್ಯೆ ಇದ್ದಾಗ ಕನ್ನಡಕ ಧರಿಸಲು ಇಷ್ಟವಿಲ್ಲದಿದ್ದರೆ ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವುದು ಪ್ರಯೋಜನಕಾರಿ ಆಗಿದೆ. ಆದರೆ, ಇವುಗಳನ್ನು ಬಳಸುವಾಗ ಒಂದು ಸಣ್ಣ ನಿರ್ಲಕ್ಷವೂ ಸಹ ನಿಮ್ಮ ಕಣ್ಣಿನ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಬಹುದು. :ಪ್ರಸ್ತುತ ಈ ತಂತ್ರಜ್ಞಾನ ಯುಗದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಅತಿಯಾದ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆಗಳು ( ) ಸರ್ವೇ ಸಾಮಾನ್ಯ. ಇದರಿಂದ ಪರಿಹಾರಕ್ಕಾಗಿ ಸ್ಪೆಕ್ಸ್ ಧರಿಸಬಹುದು. ಆದರೆ, ಕೆಲವರು ಕನ್ನಡಕ ಎಂದರೆ ಸ್ಪೆಕ್ಸ್ ಧರಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತಾರೆ. ಸಾಮಾನ್ಯವಾಗಿ, ಕಾಂಟ್ಯಾಕ್ಟ್ ಲೆನ್ಸ್‌ಗಳು ( ) ಕನ್ನಡಕಕ್ಕಿಂತ ಕೊಂಚ ದುಬಾರಿ ಆಗಿರುತ್ತವೆ. ಬಜೆಟ್ ದೃಷ್ಟಿಯಿಂದ ಲಘುವಾದ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಕೊಂಡರೆ ಅದು ನಿಮ್ಮ ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಕೇವಲ ಅಗ್ಗದ ಕಾಂಟ್ಯಾಕ್ಟ್ ಲೆನ್ಸ್‌ ಅಷ್ಟೇ ಅಲ್ಲ, ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವಾಗ ಕೆಲವು ವಿಚಾರಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದಲೂ ಕೂಡ ಇದು ನಿಮ್ಮ ಕಣ್ಣಿಗೆ ಕುತ್ತು ತರಬಹುದು. ಅಂತಹ ವಿಚಾರಗಳೆಂದರೆ... * ದೀರ್ಘ ಸಮಯ ಬಳಕೆ:ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ದೀರ್ಘ ಸಮಯದವರೆಗೆ ಧರಿಸುವುದು ನಿಮ್ಮಯ () ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು. ಇಲ್ಲವೇ, ಇವು ನೀವು ಶಾಶ್ವತವಾಗಿ ಕನ್ನಡಕ/ ಲೆನ್ಸ್‌ಗಳನ್ನು ಧರಿಸಲು ಕಾರಣವಾಗಬಹುದು. ಇದನ್ನೂ ಓದಿ- * ಮಲಗುವಾಗ ಲೆನ್ಸ್ ಧರಿಸುವುದು:ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿ ಮಲಗುವುದು ಕೂಡ ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಕಣ್ಣಿನಲ್ಲಿ ಕಿರಿಕಿರಿ, ಕಣ್ಣಿನ ಸೋಂಕಿನಂತಹ ಸಮಸ್ಯೆಗಳನ್ನು ಸೃಷ್ಟಿಸಬಹುದು. * ಸಾಮಾನ್ಯ ನೀರಿನ ಬಳಕೆ:ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ವಾಶ್ ಮಾಡಲು ಅಪ್ಪಿತಪ್ಪಿಯೂ ಸಹ ಸಾಮಾನ್ಯ ನೀರನ್ನು ಬಳಸಬೇಡಿ. ಬದಲಿಗೆ ಹೈ ಡ್ರಾಪ್ಸ್, ಇಲ್ಲವೇ ಲೆನ್ಸ್ ವಾಶ್ ಗಾಗಿ ನೀಡಲಾಗುವ ಸೂಕ್ತ ದ್ರಾವಣವನ್ನು ಬಳಸಿ. ಇಲ್ಲವೇ ಇದು ನಿಮ್ಮ ಕಣ್ಣಿನಲ್ಲಿ ಸೋಂಕು ಉಂಟು ಮಾಡಬಹುದು. ಇದನ್ನೂ ಓದಿ- * ಶುಚಿತ್ವ:ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಲೆನ್ಸ್ ಧರಿಸುವಾಗ/ತೆಗೆಯುವಾಗ ಕೈ ಶುಚಿತ್ವದ ಬಗ್ಗೆ ಕಾಳಜಿ ವಹಿಸಿ. ಕೈ ಶುಚಿಯಾಗಿರದಿದ್ದರೆ ಆ ಕೊಳಕಿನಿಂದ ಸೂಕ್ಷ್ಮ ಜೀವಿಗಳು ಕಣ್ಣನ್ನು ಪ್ರವೇಶಿಸಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...