ಈ ಕಾಯಿಲೆಯನ್ನು ಬುಡದಿಂದಲೇ ಕಿತ್ತೆಸೆಯುತ್ತದೆ ಜೀರಿಗೆ ಮತ್ತು ಬೆಲ್ಲ! ಈ ಸಮಯದಲ್ಲಿ ಸೇವಿಸಿ ಜೀರಿಗೆ ಮತ್ತು ಬೆಲ್ಲವನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಬೆಂಗಳೂರು :ನಾವು ಮಾಡುವ ಪ್ರತಿಯೊಂದು ಅಡುಗೆಯಲ್ಲಿಯೂ ಜೀರಿಗೆಯನ್ನು ಬಳಸುತ್ತೇವೆ.ಅದು ಸಾಂಬಾರ್, ರಸಂ, ಪಲ್ಯ ಏನೇ ಆಗಿರಲಿ ಅಲ್ಲಿ ಜೀರಿಗೆ ಬಳಕೆ ಇದ್ದೇ ಇರುತ್ತದೆ.ಆದರೆ, ಜೀರಿಗೆ ಮತ್ತು ಬೆಲ್ಲವನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ.ಅದರಲ್ಲಿಯೂ ಜೀರಿಗೆಯನ್ನು ಬೆಲ್ಲದ ಜೊತೆ ಸೇವಿಸಿದರೆ ದೇಹದ ಹಲವಾರು ಕಾಯಿಲೆಗಳಿಂದ ಶಾಶ್ವತ ಮುಕ್ತಿ ಸಿಗುತ್ತದೆ. ಜೀರಿಗೆ ಮತ್ತು ಬೆಲ್ಲದ ನೀರನ್ನು ತಯಾರಿಸುವುದು ಹೇಗೆ? :ಎರಡು ಲೋಟ ನೀರಿಗೆಹಾಕಿ ಅದನ್ನು ಅರ್ಧದಷ್ಟಾಗುವವರೆಗೆ ಕುದಿಸಿ.ನಂತರ ಅದಕ್ಕೆ ಬೆಲ್ಲ ಸೇರಿಸಿ.ಈ ನೀರನ್ನು ತಣ್ಣಗಾಗಲು ಬಿಡಿ.ನಂತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.ಹೀಗೆ ಜೀರಿಗೆ ಬೆಲ್ಲದ ನೀರನ್ನು ಮುಂಜಾನೆ ಎದ್ದ ಕೂಡಲೇ ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಇದನ್ನೂ ಓದಿ : ಈ ಪಾನೀಯದ ಪ್ರಯೋಜನಗಳು :ಹಿಮೋಗ್ಲೋಬಿನ್ ಕಡಿಮೆ ಇರುವವರು ಈ ಪಾನೀಯವನ್ನು ನಿತ್ಯ ಸೇವಿಸಬೇಕು.ಈ ಪಾನೀಯವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿ ರಕ್ತಹೀನತೆಯಾಗದಂತೆ ನೋಡಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :ಪ್ರತಿದಿನ ಈ ಪಾನೀಯವನ್ನು ಸೇವಿಸುವುದರಿಂದಹೆಚ್ಚಾಗುತ್ತದೆ.ಇದು ದೇಹವನ್ನು ನಿರ್ವಿಷಗೊಳಿಸುತ್ತದೆ.ಹಾಗಾಗಿ ಇದನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಿದರೆ ಒಳ್ಳೆಯದು. ಇದನ್ನೂ ಓದಿ : ಹೊಟ್ಟೆನೋವು, ಸೆಳೆತ,ಗ್ಯಾಸ್,ಮಲಬದ್ಧತೆ ಮುಂತಾದ ಹೊಟ್ಟೆಗೆಸಂಬಂಧಿಸಿದ ಸಮಸ್ಯೆಗಳಿರುವವರು ಈ ಪಾನೀಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಮುಟ್ಟಿನ ನೋವು ನಿವಾರಣೆಗೆ :ಹೆಚ್ಚಿನ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ.ಈ ನೋವಿನ ಸಮಸ್ಯೆಗೆ ಪರಿಹಾರವಾಗಿ ಜೀರಿಗೆ ಬೆಲ್ಲದ ನೀರನ್ನು ಸೇವಿಸಬಹುದು.ಅಲ್ಲದೆ, ಇದು ಸೊಂಟ,ಕೈ ಮತ್ತು ಕಾಲುಗಳು ಮತ್ತು ತಲೆನೋವಿನಂತಹ ಇತರ ದೈಹಿಕ ನೋವುಗಳಿಂದಲೂ ಪರಿಹಾರ ನೀಡುತ್ತದೆ.ಸೌಮ್ಯ ಜ್ವರದ ಸಂದರ್ಭದಲ್ಲಿಯೂ ಇದನ್ನು ಸೇವಿಸಬಹುದು. ಸೂಚನೆ :ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...