ನಿತ್ಯ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಕೇವಲ ತಿಂಗಳಲ್ಲಿ ಕನ್ನಡಕಕ್ಕೆ ಗುಡ್ ಬೈ ಹೇಳಬಹುದು! : ತಂತ್ರಜ್ಞಾನ ಮುಂದುವರೆದಂತೆ ಗ್ಯಾಜೆಟ್ಗಳ ಬಳಕೆ ಹೆಚ್ಚಾಗಿದೆ. ಏನೇ ಆದರೂ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಗ್ಯಾಜೆಟ್ ಗಳ ಬಳಕೆಯಿಂದ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇದು ದೃಷ್ಟಿ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. :ಇತ್ತೀಚಿನ ದಿನಗಳಲ್ಲಿ ಟಿವಿ, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಹೀಗೆ ಗ್ಯಾಜೆಟ್ಸ್ ಗಳ ಅತಿಯಾದ ಬಳಕೆಯಿಂದಾಗಿ ತುಂಬಾ ಸಣ್ಣ ವಯಸ್ಸಿನಲ್ಲಿಯೇ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ, ಸಣ್ಣ ಮಕ್ಕಳು ಅತಿ ಸಣ್ಣ ವಯಸ್ಸಿನಲ್ಲಿಯೇ ಕನ್ನಡಕ ಧರಿಸುವಂತಾಗಿದೆ. ಧರಿಸುವುದರಿಂದ ತಕ್ಷಣದ ಸಮಸ್ಯೆ ಬಗೆಹರಿಯಬಹುದು. ಆದರೆ, ಆರೋಗ್ಯಕರ ದೃಷ್ಟಿಯನ್ನು () ಕಾಪಾಡಿಕೊಳ್ಳಲು ಕೆಲವು ಆಹಾರಗಳು ನಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಕಣ್ಣಿನ ಡ್ಯಾಮೇಜ್ ಅನ್ನು ಸಂಪೂರ್ಣವಾಗಿ ಸರಿಪಡಿಸಲು ಒಂದು ಚಮತ್ಕಾರಿ ಪುಡಿಯನ್ನು ಹಾಲಿಗೆ ಬೆರೆಸಿ ಸೇವಿಸುವುದು ಹೆಚ್ಚು ಪ್ರಯೋಜನಾರಿ ಎಂದು ಸಾಬೀತುಪಡಿಸಬಹುದು. ಇದನ್ನೂ ಓದಿ- ದೃಷ್ಟಿ ಸುಧಾರಣೆಗೆ ಚಮತ್ಕಾರಿ ಪುಡಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:ಒಂದು ಮುಷ್ಟಿ ಬಾದಾಮಿ, ಅರ್ಧ ಕಪ್ ಸೋಂಪು, ಬಿಳಿ ಕಲ್ಲು ಸಕ್ಕರೆ, ಒಂದು ಚಮಚ ಕಾಳು ಮೆಣಸು. ಇದನ್ನೂ ಓದಿ- ಪುಡಿ ತಯಾರಿಸುವ ವಿಧಾನ:ಒಂದು ಮಿಕ್ಸರ್ ಜಾರ್ ನಲ್ಲಿ ಒಂದು ಹಿಡಿ ಬಾದಾಮಿಯೊಂದಿಗೆ ಅರ್ಧ ಕಪ್ ಸೋಂಪು, ಬಿಳಿ ಸಕ್ಕರೆ, ಒಂದು ಸಣ್ಣ ಚಮಚ ಕಾಳು ಮೆಣಸನ್ನು ಹಾಕಿ ನುಣ್ಣಗೆ ರುಬ್ಬಿ. ಈ ರುಬ್ಬಿಟ್ಟ ಪುಡಿಯನ್ನು ಒಂದು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಟ್ಟು ನಿತ್ಯ ಒಂದು ಲೋಟ ಹಾಲಿಗೆ ಒಂದು ಚಮಚ ಈ ಪುಡಿಯನ್ನು ಬೆರೆಸಿ ಕುಡಿಯಿರಿ. ಪ್ರತಿದಿನ ಈ ಚಮತ್ಕಾರಿ ಪುಡಿ ಬೆರೆಸಿ ಹಾಲು ಕುಡಿಯುವುದರಿಂದ ಕೇವಲ ತಿಂಗಳಲ್ಲಿಯಾಗಿ ( ) ನಿಮ್ಮ ಕನ್ನಡಕಕ್ಕೆ ಗುಡ್ ಬೈ ಹೇಳಬಹುದು. ಕಣ್ಣಿನ ವ್ಯಾಯಾಮ:ದೃಷ್ಟಿ ಸಮಸ್ಯೆಗಳನ್ನು ನಿವಾರಿಸಲು ಕಣ್ಣಿನ ವ್ಯಾಯಾಮಗಳು ನೈಸರ್ಗಿಕ ಚಿಕಿತ್ಸೆ ಆಗಿವೆ. ಹಾಗಾಗಿ, ನಿತ್ಯ ಕಣ್ಣಿನ ವ್ಯಾಯಾಮಗಳನ್ನು ಮಾಡುವ ಮೂಲಕ ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...